ಗದಗ ನಗರಸಭೆಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಏನು ನಡೆಯುತ್ತಿದೆ?

ಅರಣ್ಯ ಇಲಾಖೆಯ ಅಪ್ಪಣೆಯಿಲ್ಲದೆ ಉರುಳಿಹೋಯಿತು ಶಾಲಾ ಮೈದಾನದ ಮರಗಳು

ದ ಹಿಲಿಂಗ್ ಹ್ಯಾಂಡ್ಸ್ ನ್ಯೂಸ್ ಬ್ಯೂರೋ….

          ಗದಗ 11, ನಗರದಲ್ಲಿ ಶತಮಾನದ ಇತಿಹಾಸವಿರುವ ನಗರಸಭೆಯ ಸಂಯುಕ್ತ ಪದವಿಪೂರ್ವ ಕಾಲೇಜು ತಮಗೆಲ್ಲ ಚಿರಪರಿಚಿತ, ಅಷ್ಟೇ ಅಲ್ಲದೇ ಹೈಸ್ಕೊಲ್ ಮತ್ತು ಪ್ರಾರ್ಥಮಿಕ ಶಾಲೆಯೂ ಇದೆ. ಮುನ್ಸಿಪಲ್ ಹೈಸ್ಕೊಲ್ ಎಂದರೆ ಒಂದಾನೋದು ಕಾಲದಲ್ಲಿ ಸುತ್ತಲಿನ ಹತ್ತಾರು ಜಿಲ್ಲೆಗಳಿಗೆ ಸುಪ್ರಸಿದ್ದ ಹಾಗೂ ಮಹಾನ್ ಮೆಧಾವಿಗಳಾದ ದಿವಂಗತ ಕೆ ಎಚ್ ಪಾಟೀಲರು ಸೇರಿದಂತೆ ಸಾಕಷ್ಟು ಇತಿಹಾಸಕಾರರು, ಸಾಹಿತಿಗಳು, ಕ್ರೀಡಾಪಟುಗಳು ರಾಜಕೀಯ ಮತ್ಸದಿಗಳು ತಮ್ಮ ಜೀವನವನ್ನು ರೂಪಿಸಿಕೊಂಡ ಮಹಾನ್ ವಿದ್ಯಾಸಂಸ್ಥೆ, ಇಂತಹ ಸುಪ್ರಸಿದ್ದ ವಿದ್ಯಾಸಂಸ್ಥೆ ಇವತ್ತು ಹೀನಾಯವಾದ ಸ್ಥಿತಿಯಲ್ಲಿರುವುದು ವಿಶಾಧನಿಯ.

ಶಾಲಾ ಅಭಿವೃದ್ದಿಪಡಿಸುವ, ಉತ್ತಮ ಶಿಕ್ಷಣ ನಿಡುವ ಶತಪ್ರಯತ್ನವನ್ನು ಶಾಲೆಯ ಶಿಕ್ಷಕವೃಂದ ಮಾಡುತ್ತಿದೆ. ಶಾಲೆಯಲ್ಲಿ ಬೆರಳೆಣಿಕೆಯ ಲೆಕ್ಕದಲ್ಲಿ ವಿದ್ಯಾರ್ಥಿಗಳಿದ್ದರೂ ಆ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ವಯಕ್ತಿಕ ಕಾಳಜಿ ತೆಗೆದುಕೊಂಡು ಮುತುವರ್ಜಿ ವಹಿಸಿ ಸಾಹಸಪಡುತ್ತ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳನ್ನು ಶಾಲೆಗೆ ದಾಕಲಿಸಬೇಕೆಂದು ಕೆಲವು ಶಿಕ್ಷಕರು ಶತಪ್ರಯತ್ನ ಪಡುತ್ತಿದ್ದಾರೆ  ಆದರೆ ನನಗ್ಯಾವುದರ ಅವಶ್ಯಕತೆ ಇಲ್ಲವೆಂಬಂತೆ ಪ್ರಿನ್ಸಿಪಾಲರು ಹುಡುಗಾಟದ ಲೆಕ್ಕವನ್ನು ಹಾಕುತ್ತಿದ್ದಾರೆ ಅದೇ ಕಾಲೇಜು ಮೈದಾನದಲ್ಲಿ ಮತ್ತೊಬ್ಬ ಶಿಕ್ಷಕ ಹಣ ಮಾಡಿಕೊಂಡರೆ ಸಾಕು ವಿದ್ಯಾರ್ಥಿ ಕಲೆತರೆಷ್ಟು ಬಿಟ್ಟರೆಷ್ಟು ಎಂದು ಸಮಜಾಯಿಸಿಕೊಂಡು ಆಧಾರ ಕಾರ್ಡ್ ತಿದ್ದುಪಡಿ ಪ್ರಮಾಣಪತ್ರಗಳಿಗೆ ಜನರಿಂದ ಐವತ್ತು ನೂರು ರುಪಾಯಿ ಪಡೆದು ಸಹಿ ಮಾಡಿಕೊಡುವ ಕಾಯಕ ಬೆಳೆಸಿಕೊಂಡಿದ್ದಾರೆ ಈ ಬಗ್ಗೆ ಈಗ್ಗೆ ಕೆಲ ತಿಂಗಳ ಹಿಂದೇ ಗದಗನ ಸಂಘಟನೆಯೊಂದು ದೂರು ಅರ್ಜಿ ಸಲ್ಲಿಸಿದೆ ಆದರೆ ದೂರು ಅರ್ಜಿಗೆ ತನಿಖೆ ಮಾಡಿ ನ್ಯಾಯ ದೊರಕಿಸುವವರು ಯಾರು? BEO / DDPI / DDPU ಬಳಿಗೆ ಲಿಖಿತ ದೂರು ಹೋದರು ಸಹ ನಮ್ಮ ಶಿಕ್ಷಣ ಇಲಾಖೆಯ ಅಧಿಕಾರಿಗಳು ಡೋಂಟ್ ಕೇರ್. ಬಹುಷ್ಯ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಇಲ್ಲಿನ ಪ್ರಿನ್ಸಿಪಾಲರಿಂದ ಸಮ್ಥಿಂಗ್  ಇರಬಹುದೇನೋ ಎಂದು ನಾವು ತಿಳಿಯಬಹುದೇ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು.
ಶಾಲಾ ಮೈದಾನದಲ್ಲಿ ಓಡಾಡುವ ಕಸ ವಿಲೇವಾರಿ ವಾಹನಗಳಿಗೆ ಸಂಬಂದಿಸಿದಂತೆ ನಮ್ಮ ಶಾಲೆ ಉಳಿಸಿ ಎಂಬ ಅಭಿಯಾನವನ್ನು ಕೈಗೊಂಡು ಮಾನ್ಯ ಶಾಸಕರಾದ ಶ್ರೀ ಎಚ್ ಕೆ ಪಾಟೀಲ್ ಸಾಹೇಬರಿಗೆ ಲಿಕಿತ ದೂರು ಸಲ್ಲಿಸಿದ ಬಳಿಕ ಕಸ ವಿಲೇವಾರಿ ವಾಹನಗಳ ಉಪಟಳ ಕಡಿಮೆಯಾಯ್ತು ಆದರೆ ಮತ್ತೆ ಮತ್ತೊಂದು ಸಮಸ್ಯೆ ಒಕ್ಕರಿಸಿಕೊಂಡು ಕಾಲೇಜು ಮೈದಾನದಲ್ಲಿ ಪೈಪಲೈನ್ ಕಾಮಗಾರಿಯ ಶೆಡ್ ನಿರ್ಮಾಣಗೊಂಡು ಮೈದಾನದಲ್ಲಿಯೇ ಮಷಿನರಿ ಕೆಲಸಗಳು ಶುರುವಾದವು ಅಲ್ಲಿ ಕೆಲಸ ಮಾಡುವ ಹುಡುಗರು ಶಾಲಾ ಬಾಲಕಿಯರನ್ನು ಚುಡಾಯಿಸುವ ಮಟ್ಟಕ್ಕೆ ಮುಂದುವರೆದು ಈ ಘಟನೆಯೂ ಸಹ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತರಲಾಯಿತು ಆದರೂ ಇನ್ನೂ ಮೈದಾನ ಸರಿಯಾಗಲಿಲ್ಲ.. ಮಾನ್ಯ ಶಾಸಕರು ಹೇಳಿದ ಮಾತನ್ನೂ ಸಹ ಧಿಕ್ಕರಿಸುವ ಅಧಿಕಾರಿಗಳು ನಮ್ಮ ನಗರಸಭೆಯಲ್ಲಿ ಇದ್ದಾರೆ ಅನ್ನೋವಷ್ಟರ ಮಟ್ಟಿಗೆ ಘಟನೆಗಳು ನಡೆದುಹೋಗಿದೆ.
ಶಾಲಾ ಮೈದಾನದಲ್ಲಿ ಕಾಂಡೋಮ್ ಸಹ ಕಳಚಿ ಬೀಳುತ್ತದೆ ಎಂದರೆ ಎಷ್ಟು ಕುಲಗೆಟ್ಟು ಹೋಗಿದೆ ಎಂದು ನಾವೆಲ್ಲಾ ಅರಿತುಕೊಳ್ಳಬೇಕಾಗಿದೆ. ಉತ್ತಮ ಶಿಕ್ಷಣವಿರುವ ಮುನ್ಸಿಪಲ್ ಕಾಲೇಜನ್ನು ನಾವೆಲ್ಲಾ ಉಳಿಸಿಕೊಳ್ಳಲೇಬೇಕು ಇಲ್ಲಿ ಕಾರ್ಯನಿರ್ವಹಿಸುವ ಉತ್ತಮ ಶಿಕ್ಷಕರನ್ನು ಪ್ರೋತ್ಸಾಹಿಸಬೇಕು ನಮ್ಮ ಮಕ್ಕಳನ್ನು ಮುನ್ಸಿಪಲ್ ಹೈಸ್ಕೊಲ್, ಕಾಲೇಜಿನಲ್ಲಿ ಸೇರಿಸುವ ಮೂಲಕ ನಾವೆಲ್ಲಾ ನಮ್ಮ ಶಾಲೆಯನ್ನು ಉಳಿಸಿಕೊಳ್ಳಬೇಕು ನಮ್ಮ ಶಾಲೆ ಉಳಿಸುವ ಅಭಿಯಾನಕ್ಕೆ ಟೊಂಕ ಕಟ್ಟಿ ಬೆಳಗಾವಿಯ ಆಂಗ್ಲ ಮಾದ್ಯಮದಲ್ಲಿ ಕಲೆಯುತ್ತಿದ್ದ ನನ್ನ ಮಕ್ಕಳನ್ನು ಕಳೆದ ವರ್ಷ ಮುನ್ಸಿಪಲ್ ಹೈಸ್ಕೊಲ್ ಕನ್ನಡ ಮಾದ್ಯಮಕ್ಕೆ ಸೇರಿಸಿ ಸದರಿ ಹೋರಾಟದಲ್ಲಿ ನಾನು ನನ್ನ ಕುಟುಂಬ ಮುಂದೆ ಬಂದಿದ್ದೇವೆ ಕಾರಣ ಮತ್ತೊಬ್ಬರಿಗೆ ಹೇಳುವ ಮೊದಲು ಅದರಲ್ಲಿ ನಾವು ಮೊದಲು ಇಳಿಯಬೇಕಲ್ಲವೇ, ಈ ಬಾರಿ ನನ್ನ ಗೆಳೆಯರಾದ ಕಂಪ್ಲಿ ತಾಲೂಕಿನ ಮಾರುತಿ ಎಂಬ ಕಾರ್ಮಿಕ ನಾಯಕರ ಸಹಕಾರದಿಂದ ಈ ವರ್ಷ ಕನಿಷ್ಠ 25 ಹೊಸ ವಿದ್ಯಾರ್ಥಿಗಳನ್ನು ಕಂಪ್ಲಿ, ಗಂಗಾವತಿ ಗಳಿಂದ ನಮ್ಮ ಸಂಘಟನೆಯ ಸಹಯೋಗದಿಂದ ನೂತನವಾಗಿ ದಾಕಲಿಸಲಾಗಿದೆ ಎಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ನಿಡುವ ಭರವಸೆ ನೀಡಿದ ಮತ್ತು ಸಹಕರಿಸುತ್ತಿರುವ ಮುನ್ಸಿಪಲ್ ಹೈಸ್ಕೊಲ್, ಪ್ರಾರ್ಥಮಿಕ ಶಾಲೆ ಮತ್ತು  ಕಾಲೇಜಿನ ಶಿಕ್ಷಕರಿಗೆ ಅನಂತ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಗದಗ ನಗರದ ಮುನ್ಸಿಪಲ್ ಸಂಸ್ಥೆಯ ಅಭಿಮಾನಿಗಳು ತಮ್ಮ ಮಕ್ಕಳನ್ನು ಶಾಲೆಗೇ ದಾಕಲಿಸುವ ಮೂಲಕ ಶಾಲೆ ಉಳಿಸಿಕೊಳ್ಳಲು ಸಹಕರಿಸಬೇಕೆಂದು ಈ ಮೂಲಕ ಕಳಕಳಿಯ ವಿನಂತಿ

ಇಲ್ಲಿಗೆ ಮುಗಿಯದ ಕಥೆ ಇನ್ನೋವರೆಗೂ ಕುಸಿದುಹೋದ ಶಾಲಾ ಛಾವಣಿಯನ್ನು ರಿಪೇರಿ ಮಾಡುವ ಮತ್ತು ಮಾಡಿಸುವ ಕೆಲಸವನ್ನು ಸಂಬಂದಿಸಿದ ಅಧಿಕಾರಿಗಳು ಮಾಡುತ್ತಿಲ್ಲ ಕಾರಣ ಗದಗ ಬೆಟಗೇರಿ ಅವಳಿ ನಗರದ ಜನತೆ ತಾವು ಸ್ವಯಂ ಸಹಾಯದ ಮೂಲಕ ಸದರಿ ಶಾಲೆಯನ್ನು ರಿಪೇರಿ ಮಾಡುವ ಕೆಲಸಕ್ಕೆ ಕೈ ಜೋಡಿಸಬೇಕು.. ರಿಪೇರಿಗೆ ಬೇಕಾದ ವ್ಯವಸ್ಥೆಯನ್ನು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಅದಕ್ಕೆ ತಗುಲುವ  ಸಲಕರಣೆಗಳನ್ನು ಹಾಗೂ ಕೆಲಸಗಾರರನ್ನು ತಮಗಾದಷ್ಟು ಶಕ್ತಿಯಲ್ಲಿ ಸ್ವಯಂ ನೇಮಿಸಿ ಸದರಿ ಶಾಲೆಯನ್ನು ದುರ್ಸ್ಥಿಗೊಳಿಸಲು ಈ ಮೂಲಕ ವಿನಂತಿ. ಅಷ್ಟೇ ಅಲ್ಲದೆ ಶಾಲಾ ಮೈದಾನದಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಅಲ್ಲಿನ ಪರಿಸರವನ್ನು ಶುದ್ದಗೊಳಿಸಲು ನಾವು ನಮ್ಮ ಪ್ರಯತ್ನವಾಗಿ ಸಂಬಂದಿಸಿದ ಇಲಾಖೆ ಮತ್ತು ಅಧಿಕಾರಿಗಳಿಗೆ ಮನವಿಗಳನ್ನು ನಿಡುವ ಕೆಲಸ ಮಾಡುತ್ತಿದ್ದರೆ ಇಲ್ಲಿ ಬ್ಯಾಳಿ ಸರ ಹೇಳಿದ್ದಾರೆ ಮಕಾಂದಾರ್ ಹೇಳಿದ್ದಾರೆ ಎಂದು ಭೃಹತ್ ಗಿಡಗಳನ್ನು ಕತ್ತರಿಸುವ ಕೆಲಸ ನಡೆದಿದೆ ಇಂದು ಸದರಿ ಸ್ಥಳಕ್ಕೆ ಹೋಗಿ ವಿಚಾರಿಸಲಾಗಿ ಬ್ಯಾಳಿ ಸರ್ ಹೇಳಿದ್ದಾರೆ ಎಂದಾಗ ಬ್ಯಾಳಿ ರವರಿಗೆ ಕೇಳಿದರೆ ನಾನವನಲ್ಲ ನಾನವನಲ್ಲ ನಾನವನಲ್ಲ ಎಂದು ಕೈ ಎತ್ತಿ ಮಕಾಂದಾರ್ ಹೇಳಿದ್ದಾರೆ ಎಂದು ಅವರ ಮೇಲೆ ಇವರು ಇವರ ಮೇಲೆ ಅವರು ಅಪವಾದ ಹಾಕಿ ಕೈ ತೊಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಲು ಕರೆ ಮಾಡಿದರೆ ಅರಣ್ಯ ಇಲಾಖೆಯ ಅಧಿಕಾರಿಗಳ ದೂರವಾಣಿ ವ್ಯಾಪ್ತಿ ಪ್ರದೇಶದ ಹೊರಗಿದೆ.. ಸದರಿ ವಿಷಯಕ್ಕೆ ಸಂಬಂದಿಸಿದಂತೆ ಉರುಳಿಸಿದ ಮರದ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಏನು ಹೇಳುವರೋ ಕಾದು ನೋಡಬೇಕಾಗಿದೆ.

ಆಂಥೋನಿ ಪೂಲಾ ಭಾರತದ ಮೊದಲ ದಲಿತ ಕಾರ್ಡಿನಲ್

ಆಂಥೋನಿ ಪೂಲಾ ಭಾರತದ ಮೊದಲ ದಲಿತ ಕಾರ್ಡಿನಲ್

ತೆಲಂಗಾಣ, ಮೇ 30: ಕ್ಯಾಥೋಲಿಕ್ ಚರ್ಚ್‌ನ ಹೊಸ ಕಾರ್ಡಿನಲ್‌ಗಳಲ್ಲಿ ಒಬ್ಬರೆಂದು ಹೆಸರಿಸಲ್ಪಟ್ಟ ಹೈದರಾಬಾದ್‌ನ ಆರ್ಚ್‌ ಬಿಷಪ್ ಆಂಥೋನಿ ಪೂಲಾ ಭಾರತದ ಕ್ಯಾಥೋಲಿಕ್ ಚರ್ಚ್‌ನ ಇತಿಹಾಸದಲ್ಲಿ ಕಾರ್ಡಿನಲ್ ಹುದ್ದೆಗೆ ಏರಿದ ಮೊದಲ ತೆಲುಗು ವ್ಯಕ್ತಿ ಮತ್ತು ದಲಿತ ವ್ಯಕ್ತಿಯಾಗಿದ್ದಾರೆ.

ಮೇ 29ರಂದು ಪೋಪ್ ಫ್ರಾನ್ಸಿಸ್ ಭಾರತದ ಇಬ್ಬರು ಸೇರಿದಂತೆ 21 ಚರ್ಚ್‌ ಮೆನ್‌ಗಳನ್ನು ಕಾರ್ಡಿನಲ್ ಹುದ್ದೆಗೆ ಏರಿಸುವುದಾಗಿ ಘೋಷಿಸಿದರು. ಈ ಬೇಸಿಗೆಯಲ್ಲಿ ವ್ಯಾಟಿಕನ್‌ನಲ್ಲಿ ನಡೆದ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಗಿದೆ. ಆಗಸ್ಟ್ 27 ರಂದು ಚರ್ಚ್‌ನವರನ್ನು ಕಾರ್ಡಿನಲ್ ಶ್ರೇಣಿಗೆ ಏರಿಸುವ ಸಮಾರಂಭವನ್ನು ನಡೆಸುವುದಾಗಿ ಪೋಪ್ ಹೇಳಿದರು.
ತೆಲುಗು ಆರ್ಚ್ ಬಿಷಪ್ ಒಬ್ಬರು ಕಾರ್ಡಿನಲ್ ಆಗಿರುವುದು ಇತಿಹಾಸದಲ್ಲಿ ಇದೇ ಮೊದಲು. ಕಾರ್ಡಿನಲ್ ಎಂಬ ಬಿರುದು ನಿಜವಾಗಿಯೂ ದೇವರ ಕೃಪೆಗೆ ಕಾರಣವಾಗಿದೆ ಎಂದು ತೆಲುಗು ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ ಉಪ ಕಾರ್ಯದರ್ಶಿ ಜೋಸೆಫ್ ಅರಳಗಡ್ಡ ಪಿಟಿಐಗೆ ತಿಳಿಸಿದರು.
ಅವರನ್ನು (ಆಂಟನಿ ಪೂಲಾ) ಈ ಕೆಲಸಕ್ಕೆ ಆಯ್ಕೆ ಮಾಡಿರುವುದು ಅದ್ಭುತ ವಿಷಯ ಮತ್ತು ದೊಡ್ಡ ಗೌರವವಾಗಿದೆ. ಇದು ದೇವರ ಅನುಗ್ರಹ ಮತ್ತು ಚರ್ಚ್ ಮತ್ತು ಅವರ ಸೇವೆಗೆ ಅವರ ಸ್ವಂತ ಸಮರ್ಪಣೆ ಮತ್ತು ಬದ್ಧತೆಯಾಗಿದೆ. ಅವರು ಚರ್ಚ್ ಬಗ್ಗೆ ಆಳವಾದ ಆಲೋಚನೆಗಳನ್ನು ಹೊಂದಿದ್ದಾರೆ. ಅವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಮತ್ತು ಅವರು ಚರ್ಚ್‌ನ ಬದ್ಧತೆಯ ಸೇವಕ ಎಂದು ಜೋಸೆಫ್ ಹೇಳಿದರು.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮೂಲದ 60 ವರ್ಷದ ಅಂಥೋನಿ ಪೂಲಾ ಫೆಬ್ರವರಿ 1992 ರಲ್ಲಿ ಪಾದ್ರಿಯಾಗಿ ದೀಕ್ಷೆ ಪಡೆದರು ಮತ್ತು ಫೆಬ್ರವರಿ 2008 ರಲ್ಲಿ ಕರ್ನೂಲ್ ಬಿಷಪ್ ಆಗಿ ನೇಮಕಗೊಂಡರು. ನವೆಂಬರ್ 2020 ರಲ್ಲಿ ಹೈದರಾಬಾದ್‌ನ ಆರ್ಚ್‌ ಬಿಷಪ್ ಆಗಿ ನೇಮಕಗೊಂಡರು.
ಭಾರತದಿಂದ ಆಯ್ಕೆಯಾದ ಇತರ ಕಾರ್ಡಿನಲ್ ಫಿಲಿಪೆ ನೇರಿ ಆಂಟೋನಿಯೊ ಸೆಬಾಸ್ಟಿಯೊ ಡಿ ರೊಸಾರಿಯೊ ಫೆರಾವೊ, ಗೋವಾ ಮತ್ತು ದಮನ್‌ನ ಆರ್ಚ್‌ ಬಿಷಪ್. ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆರ್ಚ್‌ಬಿಷಪ್ ಫೆರಾವೊ ಭಾನುವಾರ ಅಭಿನಂದಿಸಿದ್ದಾರೆ. “ಪವಿತ್ರ ಪೊನ್ಟಿಫೆಕ್ಸ್‌ ರಿಂದ 21 ಕಾರ್ಡಿನಲ್‌ಗಳಲ್ಲಿ ಒಬ್ಬರಾಗಿ ಆಯ್ಕೆಯಾದ ಆರ್ಚ್‌ ಬಿಷಪ್ ಫಿಲಿಪ್ ನೇರಿ ಫೆರಾವೊ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಸಾವಂತ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಜನವರಿ 20, 1953ರಂದು ಪಣಜಿ ಸಮೀಪದ ಅಲ್ಡೋನಾ ಗ್ರಾಮದಲ್ಲಿ ಜನಿಸಿದ ಫೆರಾವೊ ಅವರು 2003ರಿಂದ ಸ್ಥಳೀಯ ಚರ್ಚ್‌ನ ಮುಖ್ಯಸ್ಥರಾಗಿದ್ದಾರೆ. ಆರ್ಚ್‌ಬಿಷಪ್ ಪ್ಯಾಲೇಸ್‌ನ ಹಿರಿಯ ಅಧಿಕಾರಿಯ ಪ್ರಕಾರ, 69 ವರ್ಷದ ಫಾದರ್ ಫೆರಾವೊ ಅವರು ತಮ್ಮ ಧಾರ್ಮಿಕ ಅಧ್ಯಯನವನ್ನು ಅವರ್ ಲೇಡಿ ಸೆಮಿನರಿಯಲ್ಲಿ ಪ್ರಾರಂಭಿಸಿದ್ದರು. ಸಾಲಿಗಾವ್ ಮತ್ತು ನಂತರ ಪುಣೆಯ ಪಾಪಲ್ ಸೆಮಿನರಿಗೆ ಹೋದರು. ಅವರು ತತ್ವಶಾಸ್ತ್ರ ಮತ್ತು ದೇವತಾಶಾಸ್ತ್ರದಲ್ಲಿ ಪದವಿ ಪಡೆದರು ಮತ್ತು ಕೊಂಕಣಿ, ಇಂಗ್ಲಿಷ್, ಪೋರ್ಚುಗೀಸ್, ಇಟಾಲಿಯನ್, ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.
ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.

Anthony Pula Is India’s First Dalit Cardinal
ಅವರು ಅಕ್ಟೋಬರ್ 28, 1979ರಂದು ಪಾದ್ರಿಯಾಗಿ ದೀಕ್ಷೆ ಪಡೆದರು ಮತ್ತು ಡಿಸೆಂಬರ್ 12, 2003ರಂದು ಆಗಿನ ಆರ್ಚ್‌ ಬಿಷಪ್ ರೆವ್ ಫ್ರಾ ರೌಲ್ ಗೊನ್ಕಾಲ್ವ್ಸ್ ಅವರ ರಾಜೀನಾಮೆಯ ನಂತರ ಪೋಪ್ ಜಾನ್ ಪಾಲ್ II ರವರು ಗೋವಾ ಮತ್ತು ದಮನ್‌ನ ಆರ್ಚ್‌ ಬಿಷಪ್ ಆಗಿ ನೇಮಕಗೊಂಡರು. ಭಾನುವಾರದಂದು ಪೋಪ್ ಅವರ ಘೋಷಣೆಯು ಭಾರತೀಯ ಕ್ರಿಶ್ಚಿಯನ್ ಸಮುದಾಯಕ್ಕೆ ಒಂದು ದೊಡ್ಡ ಗೌರವ ಎಂದು ಹಿರಿಯ ಪತ್ರಕರ್ತ ಕ್ಯಾಮಿಲ್ ಪಾರ್ಖೆ ಹೇಳಿದರು. ಈ ದೇಶದಲ್ಲಿ ಗಮನಾರ್ಹ ಸಂಖ್ಯೆಯ ಚರ್ಚ್ ಸಂಸ್ಥೆಗಳ ಉಪಸ್ಥಿತಿ ಮತ್ತು ಭಾರತೀಯ ಚರ್ಚ್ ಪಾತ್ರದ ಅಂಗೀಕಾರವಾಗಿದೆ ಎಂದಿದ್ದಾರೆ.

ಇದು 450 ವರ್ಷಗಳ ಕ್ರಿಶ್ಚಿಯನ್ ಧರ್ಮದ ಇತಿಹಾಸವನ್ನು ಹೊಂದಿರುವ ಗೋವಾದಿಂದ ಮೊದಲ ಕಾರ್ಡಿನಲ್ ಆಗಿರುತ್ತದೆ ಮತ್ತು ಹೈದರಾಬಾದ್‌ನಿಂದ (ತೆಲಂಗಾಣದಲ್ಲಿ) ಮೊದಲನೆಯದು. ಒಂದು ದೇಶದಲ್ಲಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಕ್ಯಾಥೋಲಿಕ್ ಚರ್ಚ್‌ನಲ್ಲಿ ಕಾರ್ಡಿನಲ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಇದರಿಂದ ಭವಿಷ್ಯದಲ್ಲಿ ಭಾರತೀಯನೊಬ್ಬ ಪೋಪ್ ಆಗಿ ಆಯ್ಕೆಯಾಗಲು ಅನುಕೂಲವಾಗಲಿದೆ. ಪೋಪ್ ಈಗಾಗಲೇ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಾಸ್ ಅವರ ಸಲಹೆಗಾರರಲ್ಲಿ ಒಬ್ಬರಾಗಿದ್ದರು ಮತ್ತು ಕಾರ್ಡಿನಲ್ಸ್ ಕಾಲೇಜಿನಲ್ಲಿ ಭಾರತದಿಂದ ಇನ್ನೂ ಇಬ್ಬರು ಕಾರ್ಡಿನಲ್‌ಗಳ ನೇಮಕವನ್ನು ದೇಶದ ಭಕ್ತರು ಸ್ವಾಗತಿಸುತ್ತಾರೆ ಎಂದು ಅವರು ಹೇಳಿದರು.

ಪಾಪಲ್ ಪ್ರಕಟಣೆಯ ಪ್ರಕಾರ, ಪ್ರತಿಷ್ಠಿತ ಕೆಂಪು ಟೋಪಿಯನ್ನು ಸ್ವೀಕರಿಸುವ ಚರ್ಚ್ ಸದಸ್ಯರಲ್ಲಿ ಭಾರತದಿಂದ ಇಬ್ಬರು ಮತ್ತು ಮಂಗೋಲಿಯಾ, ಘಾನಾ, ನೈಜೀರಿಯಾ, ಸಿಂಗಾಪುರ್, ಈಸ್ಟ್ ಟಿಮೋರ್, ಪರಾಗ್ವೆ ಮತ್ತು ಬ್ರೆಜಿಲ್‌ನಿಂದ ತಲಾ ಒಬ್ಬರು ಪೀಠಾಧಿಪತಿಗಳು ಇರುತ್ತಾರೆ